PREETHISUVE NAA YESAYYA | Rev. Sanjeev K Joseph #kannadaworshipsongs #yadahproductions #rufusravi

47 Views
Published
#kannadaworshipsongs2023 #yadahproductions #rufusravi #awcbengaluru #preethisuvenayesayya

ಕರ್ತನ ಮಹಿಮೆಗಾಗಿ ರಚಿಸಿರುವಂತಹ ಈ ಹಾಡು ಯೇಸುವಿನ ಪ್ರೀತಿ, ಆತನ ತ್ಯಾಗ, ಆತನ ಮರಣ, ಆತನ ಪುನರುತ್ಥಾನ ಮತ್ತು ಇಡೀ ಲೋಕದ ಮೇಲೆ ಆತನು ಪಡುಕೊಂಡoತಹ ಅಧಿಕಾರವನ್ನ ಸಾರಿ ಹೇಳುವಂತಹ ಹಾಡು ಇದಾಗಿದೆ.

ಈ ಹಾಡು ನಮಗೆ ಬಹಳ ಆಶೀರ್ವಾದಕವಾಗಿದ್ದು ಈಗಾಗಲೇ ಅನೇಕರಿಗೆ ಆಶೀರ್ವದಿಸಿದೆ. ಯರ‍್ಯಾರು ಈ ಹಾಡನ್ನು ಕೇಳುವಿರೋ ನಿಮಗೂ ಕರ್ತನು ತಾನೆ ಆಶೀರ್ವದಿಸಲಿ.

Lyrics in Kannada:

ಪ್ರೀತಿಸುವೆ ನಾ ಯೇಸಯ್ಯಾ
ನಿನ್ನನ್ನೆ ಪ್ರೀತಿಸುವೆ
ಪ್ರೀತಿಸುವೆ ನಾ ಯೇಸಯ್ಯಾ
ಎಂದೆಂದೂ ಪ್ರೀತಿಸುವೆ
ನಿನಗಾಗಿಯೆ ನಾ ಬಾಳುವೆ
ನಿನ್ನ ಉಸಿರು ನನ್ನಲ್ಲಿದೆ
ನನ್ನದೆಲ್ಲಾ ನಿನ್ನದೆ ಈ ಜೀವ ನಿನಗಾಗಿಯೆ -2

ನಿನ್ನ ಹಾಗೆ ಯಾರು ಇಲ್ಲ
ನೀನೆ ನನಗೆ ಅತಿ ಪ್ರಿಯ
ನನ್ನ ಬಾಳಿನ ಕೋಟೆಯು ನೀ
ನನ್ನ ಜೀವದ ಜ್ಯೋತಿಯು ನೀ -2
ನಿನ್ನ ತೋಳಲ್ಲಿ ಆಡೊ ಆಸೆ
ನಿನ್ನ ಮಡಿಲಲ್ಲಿ ಮಲಗೊ ಬಯಕೆ -2

ನನಗಾಗಿ ಅವಮಾನಗೊಂಡೆ
ಮುಖದ ಮೇಲೆ ನೀ ಉಗಿಸಿಕೊಂಡೆ
ಭಾರವಾದ ಶಿಲುಬೆಯ
ಬೀಳುತ್ತ ಏಳತ್ತ ಹೊತ್ತುಕೊಂಡೆ -2
ಕೊರಡೆಗಳಿಂದ ಹೊಡಿಸಿಕೊಂಡೆ
ಶಿಲುಬೆಯ ಮೇಲೆ ಪ್ರಾಣ ಕೊಟ್ಟೆ
ಘೋರವಾದ ನನ್ ಪಾಪ ಕ್ಷಮಿಸಿದೆ
ನಿಜವಾದ ನಿನ್ ಪ್ರೀತಿ ತೋರಿಸಿದೆ

ಮೂರನೇ ದಿನದಲ್ಲಿ ನೀ
ಮರಣವನ್ನು ಜಯಿಸಿದೆ
ಭೂ ಪರಲೋಕಗಳಲ್ಲಿ
ಎಲ್ಲ ಅಧಿಕಾರ ಹೊಂದಿಕೊಂಡೆ -2
ನನಗಾಗಿ ತಿರುಗಿ ನೀ ಬರಲಿರುವೆ
ನಿನ್ ಜೊತೆಗೆ ನನ್ನನ್ನು ಕರೆದೊಯ್ಯುವೆ
ನಿನ್ನೊಂದಿಗೆ ನಾ ಜೀವಿಸುವೆ
ನಿತ್ಯವೂ ನಿನ್ನನ್ನು ಸ್ತುತಿಸುವೆ

Lyrics in English:

Preethisuve naa yesayya
Ninnanne preethisuve
Preethisuve naa yesayya
Endendu preethisuve
Ninagagiye naa baaluve
Ninna usiru nannallide
Nannadella ninnade
Ee jeeva ninagaagiye -2

Ninna haage yaaru illa
Neene nanage athi priya
Nanna baalina koteyu nee
Nanna jeevada jyothiyu nee -2
Ninna tholalli aado aase
Ninna madilalli malago bayake -2

Nanagaagi avamaanagonde
Mukhada mele nee ugisikonde
Bhaaravaada shilubeya
Beeluttha yeluttha hotthukonde -2
Koradegalinda hodisikonde
Shilubeya mele praana kotte
Ghoravaada nan paapa kshamiside
Nijavada nin preethi thoriside

Moorane dinadalli nee
Maranavannu jayiside
Bhoo paralokagalalli
Ella adhikaara hondikonde -2
Nanagaagi thirugi nee baraliruve
Nin jothege nannannu karedoyyuve
Ninnondige naa jeevisuve
Nithyavu ninnannu sthuthisuve


CREDITS:
Lyrics & Composition by: Rev. Sanjeev K Joseph
Music by: Rufus Ravi
Sung by: Rev. Sanjeev K Joseph and Mrs Hannah Sanjeev
Video Productions: Yadah Productions
Poster by: Yadah Productions
Poster Font Artwork: Rev. Daniel Joseph
Lyrics Editor: Rev. Daniel Joseph

#KannadaGospelWorshipSong2023 #sanjeevkjoseph #awcbengaluru #rufusfavi #YadahProductions #preethisuvenayesayya #newkannadasong #worship #worshipsongs #kannadasongs #kannadaworshipsongs #kannadagospel #kannada #jesussongskannada #jesuskannadasong #kannadajesussong #kannadachristiansongs
Category
Malayalam Songs Songs
Tags
Kannada, Jesus, Songs